Submission 585

ವಿದಾಯ

ರಚನೆ : ಪೂರ್ಣೇಶ್ ಎಸ್

----------------------------------

ವಿದಾಯ ಅಂದರೇನು? ಹತ್ತಾರು ಜನರ ಕರೆದು ಎಲ್ಲರೆದುರು ಬೀಳ್ಕೊಡುಗೆ ನೀಡಿ ಉಡುಗೊರೆಗಳ ಕೊಡುವುದು ವಿದಾಯವೇ? ಆತ್ಮೀಯರ ಬಂಧವ ನೆನೆದು ಎರಡು ಹಿತವಚನ ನೀಡಿ ಆನಂದದಿ ಕಣ್ತುಂಬಿಕೊಳ್ಳುವುದು ವಿದಾಯವೇ? ಕಾಡುವ ಮಧುರ ನೆನಪುಗಳ ಬುಡ ಸಮೇತ ಕಿತ್ತು ನುಗ್ಗಿ ಬರುತ್ತಿರುವ ಅಳುವನ್ನು ನಗುವಿನಿಂದ ಮರೆಸುವುದು ವಿದಾಯವೇ? ಕಣ್ಣೆದುರಿದ್ದರು ಮಾತನಾಡಲಾಗದೆ, ಎದ್ದು ಹೋದ ಮೇಲೆ ಹೇಳಲಾಗಿದೆ ಕೊರಗಿ ಸದಾ ಅವರನ್ನು ಮರೆಯುವಂತೆಜಪಿಸುವುದು ವಿದಾಯವೇ? ಉಸಿರಿಗೆ ಉಸಿರಾಗಬೇಕಾದವರು ನಟ್ಟ ನಡುವೆ ಬಿಟ್ಟು ಹೋಗುವಾಗ ಉಸಿರು ಕಟ್ಟಿ ಬಿಕ್ಕಿಬಿಕ್ಕಿ ಅಳುವುದು ವಿದಾಯವೇ? ಉಸಿರು ಇನ್ನುಮುಂದೆ ಎಂದಿನಂತೆ ಇರಲಾರದು ಎಂಬ ಸತ್ಯವ ನೆನೆದು, ಇರುವ ಹೆಸರ ಬಿಟ್ಟು ದೇಹದಿಂದ ಉಸಿರನ್ನು ತ್ಯಜಿಸುವುದು ವಿದಾಯವೇ? ವಿದಾಯ ಅಂದರೇನು? ಬಿಟ್ಟುಕೊಡಲು ಏಕಿಷ್ಟು ಸಂಕಟ? ಇಷ್ಟು ಕಷ್ಟವಾಗುತಿದೆ ಅಂದರೆ ಆ ನೆನಪುಗಳು ಎಷ್ಟು ಇಷ್ಟವಾಗಿರಬಹುದು? ಬೆಟ್ಟಕಡಲಾಳದಷ್ಟು, ಬಿಟ್ಟುಕೊಡಲಾಗದಷ್ಟು..

----------------------------------

ನೋಂದಣಿ ಐಡಿ : KPF-S1-5173

0
Votes
73
Views
1 Year
Since posted

Finished since 425 days, 0 hours and 30 minutes.

Scroll to Top