Submission 814

ರಾಧೆ ಮನದ ಅಳಲು

ರಚನೆ : ಸವಿತಾ ರಮೇಶ್

----------------------------------

ತನು ಮನದಲ್ಲೆಲ್ಲಾ ನೀನೇ ತುಂಬಿರುವೆ ಅನು ಕ್ಷಣವು ನಿನ್ನ ನೆನಪಿನಲ್ಲೇ ಇರುವೆ ನೀನು ತಿಳಿದರೂ ಸುಮ್ಮನೆ ಯಾಕಿರುವೆ ಏನು ಕಾರಣಕ್ಕೆ ನೀ ಹೀಗೆ ದೂರವಿರುವೆ ಕೊಳಲಗಾನವ ಕೇಳದೆ ಮನ ನೊಂದಿದೆ ಇಳೆಯ ತುಂಬಾ ಕಣ್ಣು ನಿನ್ನೆ ಹುಡುಕಿದೆ ಅಳಿಸಿ ಹೋದೆಯಲ್ಲಾ ನನ್ನ ಒಲವಧಾರೆ ಅಳಲು ನಿನಗೆ ಕೇಳುತ್ತಿಲ್ಲವೆ ಮಾಧವನೇ ಯಮುನಾ ತೀರದಿ ನಿನಗಾಗೆ ಕಾದಿರುವೆ ಸಮಯದ ಪರಿವೆ ಇಲ್ಲದೆನೆ ಕುಳಿತಿರುವೆ ನಮಗಂತ ತಾವರೆಯು ಅರಳಿ ನಗುತಿದೆ ಸುಮವ ಅರಳಿಸಿ ಪ್ರಕೃತಿ ಕಂಗೊಳಿಸಿದೆ ಮುನಿಸು ತೊರೆದು ಬಂದು ಬಿಡು ಪ್ರಿಯ ಮನವ ಬಿಚ್ಚಿ ನಿನ್ನೆದುರು ತೆರೆದು ಬಿಡುವೆ ದೂರ ಹೋಗದಂತೆ ಒಲವಲಿ ಬಂಧಿಸುವೆ

----------------------------------

ನೋಂದಣಿ ಐಡಿ : KPF-S1-5370

0
Votes
88
Views
1 Year
Since posted

Finished since 425 days, 0 hours and 27 minutes.

Scroll to Top