Submission 459

ನನ್ನ ನಗುಮೊಗದ ಚೆಲುವೆ

ರಚನೆ : ಪುರುಷೋತ್ತಮ್ ಪಿ ಎಂ

----------------------------------

ಅವಳೇ ನನ್ನ ನಗುಮೊಗದ ಚೆಲುವೆ.... ಭಾನು ಕವಿದಿರಲು ಗರಿಬಿಚ್ಚುವ ನವಿಲಿನಂದದಿ. ಆಗಸದಿ ಧರೆಗಿಳಿದ ಶ್ವೇತ ಸ್ಪಟಿಕದ ಮಳೆಹನಿಯು ಭದ್ರವಾಗಿ ಸಾಗರ ಸರೋವರದಿ ಚಿಪ್ಪಿನಲ್ಲಿ ಬಚ್ಚಿಟ್ಟ ಮುತ್ತಿನಂತೆ ಇರುವಳು. ಕೆಂಪೇರಿದ ಸಂಧ್ಯಾ ಸೂರ್ಯನ ಮುತ್ತಿಡುವ ಹಕ್ಕಿಯ ಮನಸ್ಸಿನದಂದಿ ಇರುವಳೆನ್ನ ಚೆಲುವೆ. ಬೆಳದಿಂಗಳಲಿ ತಂಪಾಗಿ ಅರಳಿದ ನೈದಿಲೆಯಂತೆ ನನ್ನ ಚೆಲುವೆ ಇರುವಳು. ಮಲ್ಲಿಗೆ ಸಂಪಿಗೆಯ ಮನಸೊರೆಗೊಳಿಸುವ ಸುಮವನ್ನು ಸೂಸುವ ಕಂಪಿನವಳು ನನ್ನವಳು ಎಷ್ಟೆಂದು ವರ್ಣಿಸಲಿ ಅವಳ ವರ್ಣನೆಗೆ ಕೊನೆ ಇರದಂತ ಮುತ್ತಿನಂತವಳು ಅವಳೇ... ಅವಳೇ.. ನನ್ನ ನಗುಮೊಗದ ಚೆಲುವೆ.

----------------------------------

ನೋಂದಣಿ ಐಡಿ : KPF-S1-5034

0
Votes
75
Views
1 Year
Since posted

Finished since 424 days, 22 hours and 31 minutes.

Scroll to Top