Submission 505

ದಿಸ್-ಏಬಲ

ರಚನೆ : ಅವಿಚಿ

----------------------------------

ನಾನು ವಿಚಿತ್ರಾನೆ ಹೇಗಂದ್ರೆ, ಕೆಲವರು ನೋಡಿ ನಕ್ಕರು,ನಾನಾಗ ಹಾಸ್ಯವಾದೆ ನೋಡಿ ಭಯಗೊಂಡರು ಭೀಭತ್ಸನಾದೆ, ಮುಟ್ಟಲು ಹಿಂಜರಿದರು ಆಗ ಅಸ್ಪೃಸ್ಯನಾದೆ ಸೌಲಭ್ಯ ಕೊಡಲು ಹಣೆ ಮೇಲೆ ಲೇಬಲ್ ಅಂಟಿಸಿದರು ಅಂಗವಿಕಲನಾದೆ ಒಟ್ಟಾಗಿರದಿರಲು ನೆಪ ಹುಡುಕಿದರು,ಗುಂಪಿಗೆ ಸೇರದ ಪದವಾದೆ, ಎಲ್ಲರಲ್ಲೂ ವಿಚಿತ್ರವಾದನೆ ಹೊರತು ಮನುಷ್ಯನಾಗಲಿಲ್ಲ, ಜೊತೆಲೆ ಇದ್ದು ಮುದ್ದಾಗಿ ಮಾತಾಡಿ ಎತ್ತಿ ಆಡಿಸಿದಳು, ಎಲ್ಲವ ಮರೆತು ನಗುತ್ತಾ ಒಪ್ಪಿಕೊಂಡೆ ಅವಳೇ ನನ್ನ ಜಗತ್ತು, ವಿಚಿತ್ರವನ್ನೇ ಸುಂದರ ಚಿತ್ರವಾಗಿಸಿದಳು ಈ ನನ್ನಮ್ಮ ದೇವರಿಗೂ ಮೀರಿದ ಸಹನೆ ಕರುಣೆ ಪ್ರೀತಿ ಇವಳಲ್ಲೆ ತುಂಬಿತ್ತು.

----------------------------------

ನೋಂದಣಿ ಐಡಿ : KPF-S1-5075

0
Votes
89
Views
1 Year
Since posted

Finished since 425 days, 0 hours and 15 minutes.

Scroll to Top