Submission 675

ರೈತ ನಮ್ಮೆಲ್ಲರ ಅನ್ನದಾತ

ರಚನೆ : ರೇಣುಕಾ ಸಂಗಪ್ಪನವರ್

----------------------------------

ಅನ್ನ ನೀಡುವ ಕೈ ಅದು ಎಂದಿಗೂ ಸೋಲದು.. ಅನ್ನ ಬೇಡುವ ಮನವದು ಎಂದಿಗೂ ಹರಸುವುದು. ಇಳೆಯೊಳಗೆ ಅವನೇ ಶ್ರೇಷ್ಠ ಭೂಮಿ ತಾಯಿಗೆ ಅವ ಬಲು ಇಷ್ಟ ಹೇಳ ತೀರದವನ ಕಷ್ಟ ಆ ಕಷ್ಟದಲ್ಲೂ ಅವ ಸಂತುಷ್ಟ ಅವ ಉತ್ತಿದರೆ ಮಣ್ಣಾಗುವುದು ಹದ ಅವ ಬಿತ್ತಿದರೆ ಪೈರಾಗುವುದು ಹೊಲ ನಾವುಣ್ಣುವ ಊಟ ಅವನ ಶ್ರಮದ ಫಲ ಆದರೂ ಸಿಗುತ್ತಿಲ್ಲ ಅವನ ದುಡಿಮೆಗೆ ಪ್ರತಿಫಲ ರೆಂಟೆಕುಂಟೆಗಳೇ ಅವನ ಆಸ್ತಿ ಭೂಮಿತಾಯಿಗೆ ಇವನೇ ಮಾಸ್ತಿ ನಿತ್ಯ ಎತ್ತುಗಳೊಂದಿಗೆ ಇವನ ಕುಸ್ತಿ ಇವ ಬೆಳೆದ ಬೆಳೆಯೇ ಇವನಿಗೆ ಪ್ರಶಸ್ತಿ ರೈತ ನಮ್ಮೆಲ್ಲರ ಅನ್ನದಾತ, ವಿಶ್ವದ ವಿಸ್ವಾಸಿ ರೈತ!!

----------------------------------

ನೋಂದಣಿ ಐಡಿ : KPF-S1-5287

0
Votes
89
Views
1 Year
Since posted

Finished since 424 days, 22 hours and 42 minutes.

Scroll to Top