Submission 727

ಕವನವಾಯಿತು ಕಲ್ಲು

ರಚನೆ : ಡಾ. ರಾ.ದೇವಾನಂದ.

----------------------------------

ಕವನವಾಯಿತು ಕಲ್ಲಿನ ಹೂವು , ಸಾಸಿವೆ ನೊಂದರು ತಾಳಲಾಗದು ನೋವು . ಬೇರು - ಬುಡಕ್ಕೆ ಮುನಿಸು ಕಮರಿತು ಮೇಲೇರುವ ಕನಸು , ರೆಂಬೆ-ಕೊಂಬೆಗೆ ಇರಿಸು ಮುಗ್ಗರಿಸಿತು ಮೊಗ್ಗಿನ ಮನಸು . ಬಲಗೈ ಅದೇಕೆ ಚುಚ್ಚುತಿದೆ ತನ್ನದೇ ಛಾಯೆಗೆ ! ಎಡಗಣ್ಣದೇಕೋ ಕುರುಡಾಗಿದೆ ಎದೆಗಣ್ಣಿನ ಬೇನೆಗೆ . ಅರೆಮಿಡಿವ ಹೃದಯ ನಿಂತ ನೇಹಕೆ ಜೊವು ಕುಲಕ್ಕೆ ಮುನಿಸು ಕೊಡಲಿಯ ಕಾವು ಕಲ್ಲರಳಿ ಸುಮ ಸರಳ ಸಹಜ ಸಾರ್ಥಕತೆ ನರಳುವ ಹೂನಗು ಕಿವುಚು ಕರುಳಿನ ದುರ್ವ್ಯಥೆ ಮಾನವರಿಗೆ ತಿಳಿಸಬೇಕಿಲ್ಲ ಪಶುಗಳಿಗೆ ತಿಳಿಯುವುದಿಲ್ಲ ಕಲ್ಲಿಗೆ ಮಾತಿಲ್ಲ ,ಹೂವಿನ ಕೈಗೆರೆ ಉದ್ದವಿಲ್ಲ ಕೊರಳಿಗೆ ಋಣಭಾರ ಸಂತಾಪದ ಹೆಣಹಾರ ಅದೇಕೋ ಅನ್ನಿಸಿತು ಇಳಿಸಿದೆ... ಬೂದಿಯ ಚಿತ್ತಾರ

----------------------------------

ನೋಂದಣಿ ಐಡಿ : KPF-S1-5321

0
Votes
93
Views
1 Year
Since posted

Finished since 425 days, 0 hours and 14 minutes.

Scroll to Top